ಬಾಳೆಹೊನ್ನೂರ್ - ಹೇರೂರು ಮಾರ್ಗ ಸಮೀಪದ ಸಿಗೋಡು ರಸ್ತೆ ಅಂದಾಜು ಎರಡು ತಿಂಗಳ ಹಿಂದೆ ಮರು ಡಾಂಬರರಿಕರಣಗೊಂಡಿದ್ದ ರಸ್ತೆ ಕಿತ್ತುಬರುತ್ತಿದೆ.
ಸಂಪೂರ್ಣ ಕಳಪೆ ಕಾಮಗಾರಿ ಮಾಡಿದ ಕಾರಣ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಎಲ್ಲೆಂದರಲ್ಲಿ ಕಿತ್ತು ಹೋಗಿದೆ. ಸಿಗೋಡು ಮುಖ್ಯರಸ್ತೆ ಗುಂಡಿ ಬೀಳಲು ಶುರುವಾಗಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.