ನುಡಿಗಣ್ಣ (@ybharath77) 's Twitter Profile
ನುಡಿಗಣ್ಣ

@ybharath77

ಕನ್ನಡ ಮೊದಲು
Author of 'Hosagaalada SooLnuDigaLu'. Co-author of 'Inglish-Kannada Padanerake'. "Samskrta PadagaLige KannaDaddE padagaLu'

ID: 2274416340

linkhttp://padaguttu.blogspot.com/ calendar_today03-01-2014 12:10:12

41,41K Tweet

5,5K Followers

92 Following

ನುಡಿಗಣ್ಣ (@ybharath77) 's Twitter Profile Photo

ಅಭಿಜಾತ (ಸಂ) = ೧ ಹುಟ್ಟಿದ ೨ ತನಿ, ಬದ್ದು(ಕ) ಅಭಿಜ್ಞ (ಸಂ) = ನಲ್ತಿಳಿವಿಗ (ಕ) ಅಭಿಧಾನ (ಸಂ) = ೧ ಹೆಸರು ೨ ಪದನೆರಕೆ (ಕ) ಅಭಿನವ (ಸಂ) = ಹೊಸದಾದ (ಕ) ಅಭಿರುಚಿ (ಸಂ) = ಒಲವು, ಹುರುಪು (ಕ) ಅಭಿವ್ಯಕ್ತಿ (ಸಂ) = ಹೇಳಿಕೆ (ಕ) ಅಭಿಷೇಕ (ಸಂ) = ನಲ್ಮೀಹ (ಕ) ಅಭಿಸಾರ (ಸಂ) = ಕಾದಲುಕದೆ (ಕ) ಅಭಿಸಾರಿಕೆ (ಸಂ) = ಕದೆಕಾದಲೆ (ಕ)

ನುಡಿಗಣ್ಣ (@ybharath77) 's Twitter Profile Photo

ಚಾಮರಾಜನಗರದ ಹಿಂದಿನ ಹೆಸರು - ಅರಕೊಟ್ಟಾರ ಈ ಅರಕೊಟ್ಟಾರದ ಸುತ್ತಣ ನಾಡನ್ನು 'ಎಣ್ಣೆನಾಡು' ಎಂದು ಹೇಳುತ್ತಿದ್ದರು. ಚಾ.ನಗರದ ಬಸದಿಯ ಈ ಕಲ್ಬರಹ ೧೦೩೯ ಶಕ ವರುಶದ್ದು, ಅಂದರೆ ಕ್ರಿ.ಶ.೧೧೧೭ರ ಹೊತ್ತಿಗೆ ಇಲ್ಲಿ ಎಣ್ಣೆ ತೆಗೆಯುವ ಗಾಣಗಳು ಇದ್ದಿರಬಹುದು ಎಣ್ಣೆನಾಡ, ಗಾಣದಲ್, ಒಮ್ಮಾನ, ಎಣ್ಣೆ, ಅರಕೊಟ್ಟಾರ - ಎಂಬ ಪದಗಳನ್ನು ಕಾಣಬಹುದು

ಚಾಮರಾಜನಗರದ ಹಿಂದಿನ ಹೆಸರು - ಅರಕೊಟ್ಟಾರ 

ಈ ಅರಕೊಟ್ಟಾರದ ಸುತ್ತಣ ನಾಡನ್ನು 'ಎಣ್ಣೆನಾಡು' ಎಂದು ಹೇಳುತ್ತಿದ್ದರು. 

ಚಾ.ನಗರದ ಬಸದಿಯ ಈ ಕಲ್ಬರಹ ೧೦೩೯ ಶಕ ವರುಶದ್ದು, 

ಅಂದರೆ ಕ್ರಿ.ಶ.೧೧೧೭ರ ಹೊತ್ತಿಗೆ ಇಲ್ಲಿ ಎಣ್ಣೆ ತೆಗೆಯುವ ಗಾಣಗಳು ಇದ್ದಿರಬಹುದು

ಎಣ್ಣೆನಾಡ, ಗಾಣದಲ್, ಒಮ್ಮಾನ, ಎಣ್ಣೆ, ಅರಕೊಟ್ಟಾರ - ಎಂಬ ಪದಗಳನ್ನು  ಕಾಣಬಹುದು
ನುಡಿಗಣ್ಣ (@ybharath77) 's Twitter Profile Photo

ಕೆಳದಿ ಚೆನ್ನಮ್ಮ ಸೋಂದೆಯವರೊಡನೆ ಕಾದಾಟ ಮಾಡಿ ಮಿಡಿಜೆ ಕೋಟೆಯನ್ನು ವಶಪಡಿಸಿಕೊಂಡಳು -'ಕೆಳದಿನ್ರುಪ ವಿಜಯಂ' ಈಗಿನ ಮಿರ್ಜಾನ್ ಕೋಟೆಯ ದಿಟವಾದ ಹೆಸರು 'ಮಿಡಿಜೆ' ಕೋಟೆ ಇರಬಹುದೆ? ನಮ್ 𝐇𝐈𝐒𝐓𝐎𝐑𝐘 ❄

ಕೆಳದಿ ಚೆನ್ನಮ್ಮ ಸೋಂದೆಯವರೊಡನೆ ಕಾದಾಟ ಮಾಡಿ ಮಿಡಿಜೆ ಕೋಟೆಯನ್ನು ವಶಪಡಿಸಿಕೊಂಡಳು  

-'ಕೆಳದಿನ್ರುಪ ವಿಜಯಂ'

ಈಗಿನ ಮಿರ್ಜಾನ್ ಕೋಟೆಯ ದಿಟವಾದ ಹೆಸರು 'ಮಿಡಿಜೆ' ಕೋಟೆ ಇರಬಹುದೆ?

<a href="/NamHistory/">ನಮ್ 𝐇𝐈𝐒𝐓𝐎𝐑𝐘 ❄</a>
ನುಡಿಗಣ್ಣ (@ybharath77) 's Twitter Profile Photo

ಕಲ್ಬರಹದಲ್ಲಿ ಒಂದು ಹೆಸರು ಹೀಗಿತ್ತು - ನನ್ನಿಯಗೋವ ನನ್ನಿಯಗೋವ = ನನ್ನಿಯಗೆ+ಓವ = Protector of Truthful ಮಕ್ಕಳಿಗೆೆ ಎಂತಹ ಒಳ್ಳೆಯ ಹೆಸರು ಅನ್ನಿಸಿತು ಇದಲ್ಲದೆ, ನನ್ನಿಯಿಂಬ (ಕ) = ಸತ್ಯಾಶ್ರಯ (ಸಂ) ಇದಲ್ಲದೆ, 'ನನ್ನಿಗ' ಎಂಬ ಹೆಸರು ಕಲ್ಬರಹದಲ್ಲಿ ಸಿಕ್ಕಿದೆ

ನುಡಿಗಣ್ಣ (@ybharath77) 's Twitter Profile Photo

ಈಗಿನ ಹೆಸರು - ಕಲ್ಬರಹದಲ್ಲಿನ ಹೆಸರು ------------ ಕಲಘಟಗಿ - ಕಲ್ಲಕುಟಿಗೆ ಹಿರೇಕೆರೂರು - ಪಿರಿಯ ಕೆಱೆಯೂರು ರಟ್ಟಿಹಳ್ಳಿ - ರಟ್ಟಪಳ್ಳಿ ಕರ‍್ಗುದರಿ - ಕಱೆಗುದುರೆ ಹಿರೇಕಣ್ಗಿ - ಪಿರಿಯ ಕಣ್ನಗೆ ಅಬಲೂರು - ಅಬ್ಬಲೂರು ಬ್ಯಾಹಟ್ಟಿ - ಬೇರ‍್ಪಟ್ಟಿ, ಬೇಹಟ್ಟಿ ಹೊಂಬಳ - ಹೊಂಬಳಲು ನೇಸರ‍್ಗಿ - ನೇಸಱಿಗೆ

ನುಡಿಗಣ್ಣ (@ybharath77) 's Twitter Profile Photo

👉ಧ್ರುವ, ರಟ್ಟಕೂಟ 👉ಕ್ರಿ.ಶ ? 👉ಸಿಡೆನೂರ್, ಹಿರೆಕೆರೂರ್ ಗಡಿ, ದಾರವಾಡ ಕಂಪಣ ಸ್ವಸ್ತಿ ಶ್ರೀ ದೋರಪ್ಪರಸರ್ ಪೃಥಿವಿರಾಜ್ಯಂಗೆಯೆ ಮಾರಕ್ಕ ಅರಸರ್ ಬನವಾಸಿನಾಡಾಳೆ ಬಿನಎತಿ ಅಬ್ಬೆ ಊರಾಳೆ ಮುಡುಗಾರ ತೊಣ್ಣಿನ್ದರ ಮಗನುಂ ಪೊರಿಗೊಣ್ಣಿನ್ದಮ್ಮಗನುಂ ಶ್ರೀಯಮ್ಮನೆ ಮ್ಬೊ .....ಸಿಡಿಯನೂರ ಧ್ರುವನ (ನೃಪತುಂಗನ ತಾತ) ದಿಟವಾದ ಹೆಸರು 'ದೋರಪ್ಪರಸ'

ನುಡಿಗಣ್ಣ (@ybharath77) 's Twitter Profile Photo

Chavundaraya (ಚಾವುಂಡರಾಯ) But, waterfall is named after Ganga Raja (seems different??) ವಿಜಯನಗರದ ಕಾಲದಲ್ಲಿ ಆಗಿನ ಅರಸರು ಆನೆಗುಂದಿ ಅರಸುಮನೆತನಕ್ಕೆ ಸೇರಿದ 'ಗಂಗರಾಜ'ನೆಂಬುವನನ್ನು ಶಿವನಸಮುದ್ರವೆಂಬ ನಡುಗಡ್ಡೆಯನ್ನು ಆಳಲು ಕಳಿಸಿದರು. ಹಾಗಾಗಿ ಇದಕ್ಕೆ 'ಗಂಗನ ಚುಕ್ಕಿ' ಎಂಬ ಹೆಸರು ಬಂದಿತು. padaguttu.blogspot.com/2016/11/blog-p…

ನುಡಿಗಣ್ಣ (@ybharath77) 's Twitter Profile Photo

ಮಯ್ಸೂರ ಅರಮನೆಯಲ್ಲಿ ಅರಸಿಯ ಜೊತೆ ಇರುವವರಿಗೆ 'ಅವ್ವೆಯರು' [ ಸಖಿ- ಸಂ] ಎಂದು ಹೇಳುತ್ತಿದ್ದರು ಅವ್ವೆ #ಕನ್ನಡದ್ದೇ ಪದ ಇವರಿಗಾಗಿ ಕೆಲವು ಹಳ್ಳಿಗಳನ್ನು ಕೊಡುಗೆಯಾಗಿ ಕೊಡಲಾಯಿತು. ಅಂತಹ ಹಳ್ಳಿಗಳಿಗೆ 'ಅವ್ವೆಯರ ಹಳ್ಳಿ' ಇಲ್ಲವೆ 'ಅವ್ವೇರಳ್ಳಿ' ಎಂಬ ಹೆಸರು ಬಂದಿರಬಹುದು ಮಂಡ್ಯ-ಮಯ್ಸೂರು ಕಡೆ ಹಲವು 'ಅವ್ವೇರಳ್ಳಿ'ಗಳನ್ನು ಕಾಣಬಹುದು

ನುಡಿಗಣ್ಣ (@ybharath77) 's Twitter Profile Photo

ಮಾನಂದವಾಡಿ (ಈಗ ಕೇರಳದಲ್ಲಿದೆ) - ಇದರ ಹಿಂದಿನ ಹೆಸರು ಮಹಾಂತೋಡು ಮಾಹಾನ್+ತೋಡು = Big +water-course DED3543 Ka. tōḍu water-course; Ma. tōṭu water-course, natural and artificial.

ನುಡಿಗಣ್ಣ (@ybharath77) 's Twitter Profile Photo

ಮರಾಟಿ ಓರುಗ ಅರ್.ಸಿ.ಢೇರೆ ಅವರು ತೋರಿಸಿಕೊಟ್ಟಿರುವಂತೆ ವಿಟ್ಠಲ(ಸಂ) ಎಂಬುದು ಕನ್ನಡದ ಗಂಡು ಮಕ್ಕಳ ಹೆಸರುಗಳಾದ ಬಿಟ್ಟು, ಬಿಟ್ಟರ ಎಂಬುದರಿಂದ ಬಂದಿದೆ 👉'ಬಿಟ್ಟು' ಎಂಬುದು ೬ ನೇ ನೂರೇಡಿನಲ್ಲಿಯೂ 'ಬಿಟ್ಟರಸ' ಎಂಬುದು ೮ನೇ ನೂರೇಡಿನಲ್ಲಿಯೂ ಮತ್ತು 'ಬಿಟ್ಟಿಗ' ಎಂಬ ಹೆಸರು ೯ನೇ ನೂರೇಡಿನಲ್ಲಿಯೂ ಕನ್ನಡದ ಕಲ್ಬರಹಗಳಲ್ಲಿ ಕಾಣಿಸಿಕೊಂಡಿದೆ +

ನುಡಿಗಣ್ಣ (@ybharath77) 's Twitter Profile Photo

👉ಹೊಯ್ಸಳ ದೊರೆ ವಿಷ್ಣುವರ್ಧನನ ಹಿಂದಿನ ಹೆಸರು ಕೂಡ ಬಿಟ್ಟಿದೇವ/ಬಿಟ್ಟಿಗ 👉ಕೊಲ್ಲಾಪುರದ ಪಟ್ಟನ್ ಕೊಡೋಲಿಯಲ್ಲಿ ವಿಟ್ಠಲ-ವೀರಪ್ಪರ ಗುಡಿ ಇದೆ. ಅಲ್ಲದೆ ವೀರಪ್ಪ<ಬೀರಪ್ಪ ಕನ್ನಡ ಕುರುಬರ ದೇವರು ಹಾಗಾದರೆ 'ಬಿಟ್ಟು' ಎಂಬುದರ ಹುರುಳೇನು ? ಕನ್ನಡದಲ್ಲಿ ಇಂದಿಗೂ 'ಬಿಡು' ಎಂಬುದಕ್ಕೆ ಓಡಿಸು ಅಂದರೆ drive/ride ಎಂಬ ಹುರುಳಿದೆ. +

ನುಡಿಗಣ್ಣ (@ybharath77) 's Twitter Profile Photo

ಅಲಮೇಲು - ಇದು #ಕನ್ನಡದ್ದೇ ಹೆಸರು ಅಲರ್ಮೇಲಮ್ಮ = ಅಲರ್+ಮೇಲ್+ಅಮ್ಮ = ತಾವರೆಹೂವಿನ ಮೇಲೆ ಇರುವ ಅಮ್ಮ ಅಂದರೆ ಲಕುಮಿ (Lakshmi) ಅಲಮೇಲು < ಅಲರ್ಮೇಲಮ್ಮ

ನುಡಿಗಣ್ಣ (@ybharath77) 's Twitter Profile Photo

#ಶಿವಮೊಗ್ಗ ಜಿಲ್ಲೆಯ #ಭದ್ರಾವತಿ ಯ ಹಿಂದಿನ ಹೆಸರು ಬೆಂಕಿಪುರ. ಮುದ್ದಣನ ಹೆಂಡತಿಯು ಬೆಂಕಿಪುರದ ಹತ್ತಿರ ಇರುವ ಕಾಗೆಕೋಡಮಗ್ಗಿ ಎಂಬ ಊರಿನವಳು. ಸರ್ ಎಂ. ವಿಶ್ವೇಶ್ವರಯ್ಯನವರು ಇಲ್ಲಿ ಕಬ್ಬಿಣದ ಕಾರ್ಖಾನೆಯನ್ನು ಸ್ಥಾಪಿಸಿದ ಮೇಲೆ ಭದ್ರಾವತಿ ಎಂಬ ಈ ಹೊಸ ಹೆಸರು 19ನೆಯ ಶತಮಾನದ ಕೊನೆಯವರೆಗೂ ಈ ಊರಿಗೆ ಬೆಂಕಿಪುರವೆಂದು ಕರೆಯುತ್ತಿದ್ದರು.

#ಶಿವಮೊಗ್ಗ ಜಿಲ್ಲೆಯ #ಭದ್ರಾವತಿ ಯ ಹಿಂದಿನ ಹೆಸರು ಬೆಂಕಿಪುರ.  

ಮುದ್ದಣನ ಹೆಂಡತಿಯು  ಬೆಂಕಿಪುರದ ಹತ್ತಿರ ಇರುವ ಕಾಗೆಕೋಡಮಗ್ಗಿ ಎಂಬ ಊರಿನವಳು.

ಸರ್ ಎಂ. ವಿಶ್ವೇಶ್ವರಯ್ಯನವರು ಇಲ್ಲಿ ಕಬ್ಬಿಣದ ಕಾರ್ಖಾನೆಯನ್ನು ಸ್ಥಾಪಿಸಿದ ಮೇಲೆ ಭದ್ರಾವತಿ ಎಂಬ ಈ ಹೊಸ ಹೆಸರು

19ನೆಯ ಶತಮಾನದ ಕೊನೆಯವರೆಗೂ ಈ ಊರಿಗೆ ಬೆಂಕಿಪುರವೆಂದು ಕರೆಯುತ್ತಿದ್ದರು.
ನುಡಿಗಣ್ಣ (@ybharath77) 's Twitter Profile Photo

ತಲಕಾಡು ಗಂಗರ ಇಮ್ಮಡಿ ಮಾರಸಿಂಹ (ಕ್ರಿ.ಶ. ೯೭೩) 'ಗುತ್ತಿಯ ಗಂಗ'ರಾಜ ಎಂದು ಹೆಸರು ಪಡೆದಿದ್ದ . ಆ ಗುತ್ತಿ ಈಗ ಆಂದ್ರಪ್ರದೇಶದಲ್ಲಿದೆ ಅಲ್ಲದೆ, ಗುತ್ತಿಯ ಕೋಟೆಯ ತುದಿಯಲ್ಲಿ ಸಿಕ್ಕಿರುವ ಎಲ್ಲ ಕಲ್ಬರಹಗಳು #ಕನ್ನಡದ್ದೇ

ತಲಕಾಡು ಗಂಗರ ಇಮ್ಮಡಿ ಮಾರಸಿಂಹ  (ಕ್ರಿ.ಶ. ೯೭೩)
'ಗುತ್ತಿಯ ಗಂಗ'ರಾಜ ಎಂದು ಹೆಸರು ಪಡೆದಿದ್ದ .   

ಆ ಗುತ್ತಿ ಈಗ ಆಂದ್ರಪ್ರದೇಶದಲ್ಲಿದೆ

ಅಲ್ಲದೆ, ಗುತ್ತಿಯ ಕೋಟೆಯ ತುದಿಯಲ್ಲಿ ಸಿಕ್ಕಿರುವ ಎಲ್ಲ ಕಲ್ಬರಹಗಳು #ಕನ್ನಡದ್ದೇ
ನುಡಿಗಣ್ಣ (@ybharath77) 's Twitter Profile Photo

originality (E) = ತನ್ನತನ (ಕ) maturity (E) = ತನಿತನ (ಕ) creativity (E) = ಮಾಡುಗತನ (ಕ) #ಕನ್ನಡದ್ದೇ

ರವಿ-Ravi ಆಲದಮರ (@aaladamara) 's Twitter Profile Photo

Asking to communicate in basic Kannada in Karnataka is termed language terrorism. However, making Hindi compulsory in Karnataka schools from a young age is called Nationalism. #StopHindilmposition #ಹಿಂದಿಹೇರಿಕೆನಿಲ್ಲಿಸಿ #Kannada #Nationalism #ನಮ್ಮನಾಡು_ನಮ್ಮಆಳ್ವಿಕೆ

ನುಡಿಗಣ್ಣ (@ybharath77) 's Twitter Profile Photo

ಹೊಸ ಕನಸು ಹೊಸ ಮೊಗಸು ಹೊಸ ಹೆಜ್ಜೆ ...ಬೇಗ ನಿಮ್ಮ ಮುಂದೆ ಬರಲಿದೆ ನಿಮ್ಮ ಬೆಂಬಲವಿರಲಿ 🙏

Ganesh Chetan (@ganeshchetan) 's Twitter Profile Photo

Every single person who is in a customer service role in Karnataka should know Kannada. Make it mandatory through law Siddaramaiah avare. This is something very basic. There is nothing to debate in this. #ServeInMyLanguage ಕನ್ನಡ ಗ್ರಾಹಕರ ಕೂಟ KGK