ಮತದಾರ ಜೋಕೆ
ಎಚ್ಚರಿಕೆಯಿಂದ ಚಲಾಯಿಸು ಹಕ್ಕನ್ನ ಮತದಾರ
ಅದರಿಂದಲೇ ಆಗುವುದು ಆಳುವ ವರಾರೆಂದು ನಿರ್ಧಾರ
ಎಚ್ಚರ ತಪ್ಪಿದ್ದಲ್ಲಿ ಬರಬಹುದು ಒಕ್ಕೂಟ ಅಯೋಗ್ಯರ
ಸೃಷ್ಟಿಯಾಗಬಹುದು ಸರಕಾರವೆಂಬ ಭಸ್ಮಾಸುರ
ಜಿ. ಜಿ.ಲಕ್ಷ್ಮಣ ಪ್ರಭು
ಜನವರಿ ೨೫, ರಾಷ್ಟ್ರೀಯ ಮತದಾರರ ದಿನ
ಜನ ಗಣದ ಐಕ್ಯಗಾನ
ಗಣರಾಜ್ಯೋತ್ಸವ ಬರಲು ನೆನಪಾಗುವುದು ಸಂವಿಧಾನ
ಜನ ಗಣ ಮನದಿಂದ ಪ್ರಜಾಪ್ರಭುತ್ವದ ಗುಣಗಾನ
ಭಾರತೀಯರೆಲ್ಲರೂ ಒಂದೆಂಬ ಭಾವನೆಯ ಪರಿಜ್ಞಾನ
ಅನೇಕತೆಯಲ್ಲಿ ಏಕತೆಯೇ ನಮ್ಮೆಲ್ಲರ ಐಕ್ಯಗಾನ
ಜಿ ಜಿ ಲಕ್ಷ್ಮಣ ಪ್ರಭು