Nagathihalli Chandrashekara (@nomadchandru) 's Twitter Profile
Nagathihalli Chandrashekara

@nomadchandru

Teacher, Social Activist, Author, Publisher, Columnist, Environmentalist, Screenplay & Dialogue Writer, Lyricist, TV & Film Director.

ID: 866632856

linkhttps://nagathihalli.in/ calendar_today07-10-2012 17:05:46

3,3K Tweet

33,33K Followers

52 Following

Nagathihalli Chandrashekara (@nomadchandru) 's Twitter Profile Photo

ಭಾಗ-೨ ಭೈರಪ್ಪನವರ ನೆನಪಿನ ಶಕ್ತಿ ಚೆನ್ನಾಗಿತ್ತು.ಬೆನ್ನು ನೋವು ಹೊರತುಪಡಿಸಿ ಮಾನಸಿಕವಾಗಿ ದೈಹಿಕವಾಗಿ ಆರೋಗ್ಯವಾಗಿದ್ದರು. ಅವರ ಉತ್ಸಾಹ,ಹಸನ್ಮುಖ ಕಂಡು ಭೈರಪ್ಪನವರು ಶತಾಯುಷಿಗಳಾಗುತ್ತಾರೆ ಎಂದುಕೊಂಡಿದ್ದೆವು. ಹುಸಿಯಾಯಿತು.ವಿಶ್ವೇಶ್ವರ ಭಟ್, ಸಹನಾ ವಿಜಯಕುಮಾರ್, ಸಾಹಿತ್ಯ ಭಂಡಾರದ ಅರುಣ್ ಮುಂತಾದ ಕೆಲವೇ ಆಪ್ತರು ಅಲ್ಲಿ ಭೇಟಿಯಾಗಿದ್ದರು.

ಭಾಗ-೨ 
ಭೈರಪ್ಪನವರ ನೆನಪಿನ ಶಕ್ತಿ ಚೆನ್ನಾಗಿತ್ತು.ಬೆನ್ನು ನೋವು ಹೊರತುಪಡಿಸಿ ಮಾನಸಿಕವಾಗಿ ದೈಹಿಕವಾಗಿ ಆರೋಗ್ಯವಾಗಿದ್ದರು. ಅವರ ಉತ್ಸಾಹ,ಹಸನ್ಮುಖ ಕಂಡು ಭೈರಪ್ಪನವರು ಶತಾಯುಷಿಗಳಾಗುತ್ತಾರೆ ಎಂದುಕೊಂಡಿದ್ದೆವು. ಹುಸಿಯಾಯಿತು.ವಿಶ್ವೇಶ್ವರ ಭಟ್, ಸಹನಾ ವಿಜಯಕುಮಾರ್, ಸಾಹಿತ್ಯ ಭಂಡಾರದ ಅರುಣ್ ಮುಂತಾದ ಕೆಲವೇ ಆಪ್ತರು ಅಲ್ಲಿ ಭೇಟಿಯಾಗಿದ್ದರು.
Nagathihalli Chandrashekara (@nomadchandru) 's Twitter Profile Photo

ಭಾಗ-೧ ಇದು ನಿರೀಕ್ಷಿತ ನಿರ್ಗಮನ. ಆದರೂ ದುಃಖದಾಯಕ. ವಾರ್ಸಾದಲ್ಲಿ ತಿರುಗಾಡುತ್ತಿರುವಾಗ ಭೈರಪ್ಪನವರ ಮರಣವಾರ್ತೆ. ಪೋಲೆಂಡ್ ಕನ್ನಡಿಗರ ಜತೆಗೂಡಿ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇನೆ. ದೇಶ ಬಿಡುವ ಮುನ್ನ ಅವರನ್ನು ಭೇಟಿ ಮಾಡಿದ್ದೆ. ಅವರ ಕೊನೆಯ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದೆ…

ಭಾಗ-೧
ಇದು ನಿರೀಕ್ಷಿತ ನಿರ್ಗಮನ. ಆದರೂ ದುಃಖದಾಯಕ. ವಾರ್ಸಾದಲ್ಲಿ ತಿರುಗಾಡುತ್ತಿರುವಾಗ ಭೈರಪ್ಪನವರ ಮರಣವಾರ್ತೆ.
ಪೋಲೆಂಡ್ ಕನ್ನಡಿಗರ ಜತೆಗೂಡಿ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇನೆ. 
             ದೇಶ ಬಿಡುವ ಮುನ್ನ ಅವರನ್ನು ಭೇಟಿ ಮಾಡಿದ್ದೆ. ಅವರ ಕೊನೆಯ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದೆ…
Nagathihalli Chandrashekara (@nomadchandru) 's Twitter Profile Photo

ಯಾವ ದೇಶದ ಯಾವ ಊರಿಗೆ ಹೋದರೂ “ಕನ್ನಡ ಮನಸ್ಸು”ಗಳನ್ನು “ಹೇಗಿದ್ದೀರಿ?” ಎಂದು ಮಾತನಾಡಿಸಿ ಒಂದು ಕಪ್ ಕಾಫಿ ಕುಡಿದು ಹೊರಟುಬಿಡುವುದು ನನ್ನ ಹವ್ಯಾಸ . ವಾರ್ಸಾದಲ್ಲಿ ಸುತ್ತುವಾಗ “ಪೋಲೆಂಡ್ ಕನ್ನಡಿಗರು”ಕಡೆಗಳಿಗೆಯ ಪುಟ್ಟ ಭೇಟಿಯಲ್ಲಿ ವಾರದ ದಿನವಾಗಿದ್ದರೂ “ಮುಸ್ಸಂಜೆಯ ಮಧುರ ಮಾತುಕಥೆ” ನಡೆಸಿದರು. ಹೃದ್ಯ,ಸ್ಮರಣೀಯ.ಅವರಿಗೆ ನನ್ನ ಪ್ರೀತಿ.

ಆಕೆ ಪೋಲೆಂಡ್ ನಲ್ಲಿರುವ ಭಾರತೀಯ ರಾಯಭಾರಿ. ಹೆಸರು ನಗ್ಮಾ. ಬೆಂಗಳೂರನ್ನೂ , ತುಸು ಕನ್ನಡವನ್ನೂ ಬಲ್ಲವರು. ಪ್ರೌಢೆ. ಎರಡೂ ದೇಶಗಳ ಕಲೆ, ರಾಜಕೀಯ, ಸಂಸ್ಕೃತಿ ಮುಂತಾದ ವಿಷಯಗಳನ್ನು ಚರ್ಚಿಸಿದರು. ಪ್ರೀತಿಯಿಂದ ಆದರಿಸಿದರು. ಕನ್ನಡದ ಪ್ರತಿನಿಧಿಗಳಾಗಿ ಶ್ರೇಯಸ್, ಭರತ್ ಅನಂತರಾಮು, ನಟಾಲಿಯಾ, ಶ್ರೀನಿವಾಸ್ ಜತೆಗಿದ್ದರು. ಒಂದು ಉಪಯುಕ್ತ ಭೇಟಿ.

ಆಕೆ ಪೋಲೆಂಡ್ ನಲ್ಲಿರುವ ಭಾರತೀಯ ರಾಯಭಾರಿ. ಹೆಸರು ನಗ್ಮಾ. ಬೆಂಗಳೂರನ್ನೂ ,
ತುಸು ಕನ್ನಡವನ್ನೂ ಬಲ್ಲವರು. ಪ್ರೌಢೆ. ಎರಡೂ ದೇಶಗಳ ಕಲೆ, ರಾಜಕೀಯ, ಸಂಸ್ಕೃತಿ ಮುಂತಾದ ವಿಷಯಗಳನ್ನು ಚರ್ಚಿಸಿದರು. ಪ್ರೀತಿಯಿಂದ ಆದರಿಸಿದರು. ಕನ್ನಡದ ಪ್ರತಿನಿಧಿಗಳಾಗಿ ಶ್ರೇಯಸ್, ಭರತ್ ಅನಂತರಾಮು, ನಟಾಲಿಯಾ, ಶ್ರೀನಿವಾಸ್ ಜತೆಗಿದ್ದರು. ಒಂದು ಉಪಯುಕ್ತ ಭೇಟಿ.
Nagathihalli Chandrashekara (@nomadchandru) 's Twitter Profile Photo

…ಮತ್ತೊಂದು ಸಾವಿನ ಸುದ್ದಿ. ಗೆಳೆಯ ಯಶವಂತನ ಮರಣವಾರ್ತೆ.ಮೊನ್ನೆ ನಾವಿಕದಲ್ಲಿ ತನ್ನ ನಾಟಕದ ಒಂದು ಷೋ ಮುಗಿಸಿ ಇಂಡಿಯಾಗೆ ವಾಪಸ್ಸಾಗ್ತೀನಿ ಎಂದಿದ್ದ.ಜೀವನ ನಾಟಕದ ಕೊನೆಯ ಷೋ ಮುಗಿಸಿಬಿಟ್ಟ.ತುಂಟನಗೆಯ ಸ್ನೇಹಶೀಲ ರಂಗವ್ಯಸನಿ. ಅಮೃತಧಾರೆಯ ಉಪ್ಪಿಟ್ಟು ಕಾಫಿ ತಮಾಷೆಯ ಜಡ್ಜು. ಬರೆಯಬೇಕಿದ್ದ ತೀರ್ಪು ಬರೆಯದೆ ಹೊರಟುಹೋದ. ಅವಗೆ ನನ್ನ ಅಂತಿಮ ನಮನ.

…ಮತ್ತೊಂದು ಸಾವಿನ ಸುದ್ದಿ. ಗೆಳೆಯ ಯಶವಂತನ ಮರಣವಾರ್ತೆ.ಮೊನ್ನೆ ನಾವಿಕದಲ್ಲಿ ತನ್ನ ನಾಟಕದ ಒಂದು ಷೋ ಮುಗಿಸಿ ಇಂಡಿಯಾಗೆ ವಾಪಸ್ಸಾಗ್ತೀನಿ ಎಂದಿದ್ದ.ಜೀವನ ನಾಟಕದ ಕೊನೆಯ ಷೋ ಮುಗಿಸಿಬಿಟ್ಟ.ತುಂಟನಗೆಯ ಸ್ನೇಹಶೀಲ ರಂಗವ್ಯಸನಿ. ಅಮೃತಧಾರೆಯ ಉಪ್ಪಿಟ್ಟು ಕಾಫಿ ತಮಾಷೆಯ ಜಡ್ಜು. ಬರೆಯಬೇಕಿದ್ದ 
ತೀರ್ಪು ಬರೆಯದೆ ಹೊರಟುಹೋದ. ಅವಗೆ ನನ್ನ ಅಂತಿಮ ನಮನ.
Nagathihalli Chandrashekara (@nomadchandru) 's Twitter Profile Photo

ಕನ್ನಡದತ್ತ ಜಗತ್ತು ತಿರುಗಿ ನೋಡುವಂತೆ ಚಿತ್ರ ಮಾಡುವುದೊಂದು ಬೃಹತ್ ಸವಾಲು. ಕನ್ನಡದ ಕಾಂತಾರಕ್ಕೀಗ ಕ್ಷಣಗಣನೆ. ಹೊಂಬಾಳೆಯ ವಿಜಯ್ ಮತ್ತು ರಿಷಬ್ ಎಂಬ ಇಬ್ಬರು ಸಾಹಸಿ,ಪರಿಶ್ರಮಿಗಳಿಗೆ ಶುಭವಾಗಲಿ. ಚಲನಚಿತ್ರ ಉದ್ಯಮಕ್ಕೆ ಹೊಸ ಚೈತನ್ಯ ಬರಲಿ.

ನದಿಗಳು ನನಗಿಷ್ಟ. ಪೋಲೆಂಡ್ ನಲ್ಲೊಬ್ಬಳು “ಕಾವೇರಿ”. ಹೆಸರು “ವಿಸ್ತುಲ”. ಪೋಲೆಂಡ್ ನ ಜನಪದ, ಚರಿತ್ರೆ ಮತ್ತು ಐತಿಹ್ಯಗಳ ಭಾಗ ಇವಳು.

Nagathihalli Chandrashekara (@nomadchandru) 's Twitter Profile Photo

ಮೈಖೇಲಣ್ಣನ ಜತೆ ಮಾತುಕಥೆ. ಸಾಮಾನ್ಯರ ಜತೆ ಸುಮ್ಮನೆ ಹರಟೆ. ಮಾತಿಗೊಂದು ಉದ್ದೇಶವಿಲ್ಲ. ಮಾತಾಡ್ತಾ ಆಡ್ತಾ ಉದ್ದೇಶ ಕಂಡುಕೊಳ್ಳುವುದು.

Nagathihalli Chandrashekara (@nomadchandru) 's Twitter Profile Photo

ಇಂದಿನ ಪ್ರಜಾವಾಣಿ. ನಿಮ್ಮ ಮೊದಲ ಓದಿಗಾಗಿ. ಈ ಪುಸ್ತಕ ಬೇಕಾದವರು ತರಿಸಿಕೊಳ್ಳಿ. ಕಾದಿರಿಸಬಹುದಾದ ಉತ್ತಮ ಕ್ಯಾಲಿಕೋ ಪ್ರತಿ. 99005 55255 ಅಥವಾ 74838 46640 ಈ ಮೊಬೈಲ್ ಗಳಿಗೆ ಕರೆ ಮಾಡಿ. ನಮ್ಮ ಕಛೇರಿ ನಿಮ್ಮ ಮನೆಗೆ ತಲಪಿಸುತ್ತದೆ. ಕೊಂಡು ಓದುವ ನಿಮ್ಮ ಸಹೃದಯತೆಗೆ ಋಣಿ.

ಇಂದಿನ ಪ್ರಜಾವಾಣಿ. ನಿಮ್ಮ ಮೊದಲ ಓದಿಗಾಗಿ. 
ಈ  ಪುಸ್ತಕ ಬೇಕಾದವರು ತರಿಸಿಕೊಳ್ಳಿ. ಕಾದಿರಿಸಬಹುದಾದ ಉತ್ತಮ ಕ್ಯಾಲಿಕೋ ಪ್ರತಿ. 
99005 55255 ಅಥವಾ 74838 46640 ಈ ಮೊಬೈಲ್ ಗಳಿಗೆ ಕರೆ ಮಾಡಿ. ನಮ್ಮ ಕಛೇರಿ ನಿಮ್ಮ ಮನೆಗೆ ತಲಪಿಸುತ್ತದೆ. ಕೊಂಡು ಓದುವ ನಿಮ್ಮ ಸಹೃದಯತೆಗೆ ಋಣಿ.
Nagathihalli Chandrashekara (@nomadchandru) 's Twitter Profile Photo

ಒಂದಾನೊಂದು ಕಾಲದ ಜಾಣೆಯರ ಜಾಣೆ; ಅಪ್ಪಟ ವ್ಯವಹಾರಸ್ತೆ; ಶ್ರೀಮಂತ ಮಹಿಳೆ; ಈ ಯೆಹೂದಿ ಹೆಂಗಸಿನ ಹೆಸರುಃ HELENA RUBINSTEIN

Nagathihalli Chandrashekara (@nomadchandru) 's Twitter Profile Photo

ಐದು ನಿಮಿಷ. ಪುರುಸೊತ್ತಿದ್ದರೆ ಈಕೆಯ ಮಾತನ್ನೂ ನೃತ್ಯವನ್ನೂ ಗಮನಿಸಿ. ಮುಖ್ಯವಾಗಿ ಈ ಜನಪದ ಕಲಾವಿದೆಯ ಪುಟಿಯುವ ಜೀವನೋತ್ಸಾಹ !ನಮ್ಮ ಜನಪದ ಕಲೆಗಳಷ್ಟು ವೇಗ, ರಭಸ, ತೀವ್ರತೆ ಮತ್ತು ಅಬ್ಬರವಿಲ್ಲ. ಇವರದು ಮೃದು, ಕೋಮಲ ಆದರೆ ನಮ್ಮಷ್ಟೇ ವರ್ಣಮಯ. ಈ ಹವ್ಯಾಸೀ ಕಲಾವಿದೆಗಿರುವ ವೃತ್ತಿಪರ ಶ್ರದ್ಧೆ ನನಗಿಷ್ಟವಾಯಿತು. ಬಹುಶಃ ನಿಮಗೂ.

Nagathihalli Chandrashekara (@nomadchandru) 's Twitter Profile Photo

ಕಿವಿಮಾತುಃ ಜಾತಿಗಣತಿ,ಜನಗಣತಿ ಸಮೀಕ್ಷಾ ಪ್ರಕ್ರಿಯೆಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಹಳ ಅಗತ್ಯವಾದವು. ಇವುಗಳಿಂದ ಲಭ್ಯವಾಗುವ ದತ್ತಾಂಶಗಳು ಅಧ್ಯಯನ, ಅನುಷ್ಠಾನ ಮತ್ತು ಅಭಿವೃದ್ಧಿಗೆ ಅನಿವಾರ್ಯ. ಸಿನಿಕರಾಗದೆ ಎಲ್ಲರೂ ಮುಖ್ಯವಾಗಿ ನಮ್ಮ ವಿದ್ಯಾವಂತರು ಪಾಲ್ಗೊಳ್ಳಬೇಕು.

Nagathihalli Chandrashekara (@nomadchandru) 's Twitter Profile Photo

ಪೋಲೆಂಡ್ ನ ಜನಪದರನ್ನು ಮೊನ್ನೆ ನೋಡಿದಿರಲ್ಲ? ಇವರು ನಮ್ಮ ಕೊಪ್ಪಳದ ಬುಡಕಟ್ಟು ಜಂಗಮರು. ಮನೆಯ ಮುಂದೆ ಹಾರ್ಮೋನಿಯಂ ಸದ್ದು ಕೇಳಿ ಓಡಿ ಹೋಗಿ ಮಾತನಾಡಿಸಿದೆ. ಬಿಡುವಾದಾಗ ನೋಡಿ. ಇಷ್ಟವಾದೀತು. “ಯಾರಿಗೆ ಯಾರುಂಟು ಎರವಿನ ಸಂಸಾರ”

Nagathihalli Chandrashekara (@nomadchandru) 's Twitter Profile Photo

ಮನುಷ್ಯರು ಚರಿತ್ರೆಯಿಂದ ಪಾಠ ಕಲಿತದ್ದುಂಟೆ?ಹತ್ತು ಲಕ್ಷ ಜನರನ್ನು ಭೀಕರವಾಗಿ ಕೊಂದ ಆಸ್ಚ್ ವಿಜ್ ನ ಈ ಕ್ಯಾಂಪನ್ನು ನೋಡಿದರೆ ತಲೆಸುತ್ತು ಬರುತ್ತದೆ. ಅಂದು ನಾಜಿಗಳಿಗೆ ಬಲಿಪಶುಗಳಾಗಿದ್ದ ಜೂಗಳೇ ಈಗ ಪ್ಯಾಲೆಸ್ಟೀನಿಯನ್ನರನ್ನು ಕೊಲ್ಲುತ್ತಿದ್ದಾರೆ. ಹಿಂಸೆ ಜಗತ್ತನ್ನು ಆವರಿಸಿಕೊಂಡಿದೆ. ಬೆಲೆ ತೆರುವ ಜನಸಾಮಾನ್ಯರನ್ನು ಕಂಡು ಎದೆ ಭಾರವಾಗಿದೆ.

Nagathihalli Chandrashekara (@nomadchandru) 's Twitter Profile Photo

ಸಂಶೋಧನೆಗಾಗಿತನ್ನ ಬದುಕನ್ನೇ ಸಮರ್ಪಿಸಿಕೊಂಡ ಮಹಾನ್ ವಿಜ್ಞಾನಿ ಮೇರಿ ಕ್ಯೂರಿ (1867-1934). ಕ್ಯಾನ್ಸರ್ ರೋಗಕ್ಕೆ ರೇಡಿಯಂ ಕಂಡುಹಿಡಿದ ಈಕೆ ನೋಬೆಲ್ ಪ್ರಶಸ್ತಿ ಪುರಸ್ಕೃತೆ (1903). ವಾರ್ಸಾದಲ್ಲಿರುವ ಈಕೆಯ ಮನೆಯೊಂದು ಚೆಂದದ ಮ್ಯೂಸಿಯಂ.

Nagathihalli Chandrashekara (@nomadchandru) 's Twitter Profile Photo

ಇದು ಭಾಗ-೨. ಹೆಚ್ಚು ಮಾತನಾಡಿದೆ ಅನ್ನಿಸುತ್ತೆ. ಇನ್ನಾದರೂ ಕಡಿಮೆ ಮಾಡಿಕೊಳ್ಳಬೇಕು… youtu.be/-2tquh3O1rE?si…

Nagathihalli Chandrashekara (@nomadchandru) 's Twitter Profile Photo

‘ಪ್ರಜಾವಾಣಿ ದೀಪಾವಳಿ ವಿಶೇಷಾಂಕ-೨೦೨೫’ ಓದಿದಿರಾ? ಎಲ್ಲ ಬರೆಹಗಳೂ ಚೆಂದವಾಗಿವೆ. ನನ್ನ ಬರಹವಿದೆ. ಬಿಡುವಾದಾಗ ಗಮನಿಸಿ. ಶೀರ್ಷಿಕೆಃ ‘ನನ್ನ ಗ್ರಹಿಕೆಯ ಪ್ರವಾಸ’. ಈ ಬರೆಹ ಪ್ರವಾಸದ ವಿವಿಧ ಸ್ವರೂಪ, ವ್ಯಾಖ್ಯೆ, ಬಗೆಗಳು, ಸಿದ್ಧತೆ, ಪ್ರಯೋಜನ ಇತ್ಯಾದಿಗಳನ್ನು ಒಳಗೊಂಡಿದೆ. ನೋಡುಗಾಲಸ್ಯವು ಓದುವ ಕ್ರಿಯಾಶೀಲತೆಯಾಗಲಿ. ಓದಿ-ಓದಿಸಿ.

‘ಪ್ರಜಾವಾಣಿ ದೀಪಾವಳಿ ವಿಶೇಷಾಂಕ-೨೦೨೫’ ಓದಿದಿರಾ? ಎಲ್ಲ ಬರೆಹಗಳೂ ಚೆಂದವಾಗಿವೆ. ನನ್ನ ಬರಹವಿದೆ. ಬಿಡುವಾದಾಗ ಗಮನಿಸಿ. ಶೀರ್ಷಿಕೆಃ ‘ನನ್ನ ಗ್ರಹಿಕೆಯ ಪ್ರವಾಸ’. ಈ ಬರೆಹ ಪ್ರವಾಸದ ವಿವಿಧ ಸ್ವರೂಪ,
ವ್ಯಾಖ್ಯೆ, ಬಗೆಗಳು, ಸಿದ್ಧತೆ, ಪ್ರಯೋಜನ ಇತ್ಯಾದಿಗಳನ್ನು ಒಳಗೊಂಡಿದೆ.
ನೋಡುಗಾಲಸ್ಯವು  ಓದುವ ಕ್ರಿಯಾಶೀಲತೆಯಾಗಲಿ. ಓದಿ-ಓದಿಸಿ.