B.S.Yediyurappa (@bsybjp) 's Twitter Profile
B.S.Yediyurappa

@bsybjp

Former Chief Minister of Karnataka

ID: 54936590

linkhttp://www.yeddyurappa.in calendar_today08-07-2009 15:58:06

8,8K Tweet

1,1M Followers

156 Following

B.S.Yediyurappa (@bsybjp) 's Twitter Profile Photo

ದೇಶದ ಏಕತೆ ಮತ್ತು ಸಮಗ್ರತೆಗಾಗಿ ತಮ್ಮ ಜೀವನವನ್ನೇ ಅರ್ಪಿಸಿದ ಅಪ್ರತಿಮ ರಾಷ್ಟ್ರೀಯವಾದಿ ನೇತಾರ ಡಾ. ಶ್ಯಾಮಾಪ್ರಸಾದ್ ಮುಖರ್ಜಿ ರವರ ಜನ್ಮದಿನದಂದು ಆ ರಾಷ್ಟ್ರನಿಷ್ಠ ಚೇತನಕ್ಕೆ ಗೌರವಪೂರ್ವಕ ಪ್ರಣಾಮಗಳು. #ShyamaPrasadMukherjee

B.S.Yediyurappa (@bsybjp) 's Twitter Profile Photo

ಮಾಜಿ ಕೇಂದ್ರ ಸಚಿವರು, ಹಿರಿಯ ನಾಯಕರು, ಆತ್ಮೀಯರೂ ಆದ ಶ್ರೀ ಜಿ.ಎಂ.ಸಿದ್ದೇಶ್ವರ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು! ಭಗವಂತನ ಅನುಗ್ರಹ ನಿಮ್ಮ ಮೇಲೆ ಸದಾ ಇರಲಿ ಎಂದು ಹಾರೈಸುತ್ತೇನೆ. Dr. GM Siddeshwara

B.S.Yediyurappa (@bsybjp) 's Twitter Profile Photo

Warm birthday wishes to Hon’ble Defence Minister Shri Rajnath Singh ji. Wishing you continued good health, strength, and many more years of leadership and service to Bharat. Rajnathsingh_in

Warm birthday wishes to Hon’ble Defence Minister Shri Rajnath Singh ji. Wishing you continued good health, strength, and many more years of leadership and service to Bharat.

Rajnathsingh_in
B.S.Yediyurappa (@bsybjp) 's Twitter Profile Photo

"ಗುರುವಿನ ಕರುಣದಿಂದ ಸಜ್ಜನ ಸದ್ಭಕ್ತರ ಸದ್ಗೋಷ್ಠಿಯ ಕಂಡೆ ಚೆನ್ನಮಲ್ಲಿಕಾರ್ಜುನಯ್ಯಾ" - ಗುರು ಪೂರ್ಣಿಮೆಯ ಪವಿತ್ರ ದಿನವಾದ ಇಂದು, ಶ್ರೀಶೈಲ ಜಗದ್ಗುರು ಪರಮಪೂಜ್ಯ ಶ್ರೀ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಭಗವತ್ಪಾದರು, ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪರಮಪೂಜ್ಯ ಶ್ರೀ ನಿಶ್ಚಲಾನಂದ ಸ್ವಾಮಿಗಳು, ಶ್ರೀಕ್ಷೇತ್ರ ಏಕದಳ ಬಿಲ್ವ ಬಂಡೆ ಮಠದ

ಹಿರಿಯ ರಾಜಕಾರಣಿ, ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳು, ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕದ ಮಾಜಿ ಅಧ್ಯಕ್ಷರೂ ಆದ ಶ್ರೀ ಎನ್.ತಿಪ್ಪಣ್ಣರವರು ವಿಧಿವಶರಾದ ಸುದ್ದಿ ಕೇಳಿ ಅತೀವ ದುಃಖವಾಗಿದೆ. ನಾಲ್ಕು ಬಾರಿ ವಿಧಾನ ಪರಿಷತ್‌ ಸದಸ್ಯರಾಗಿ, ವಿರೋಧ ಪಕ್ಷದ ಉಪನಾಯಕರಾಗಿ, ಸಭಾಪತಿಯಾಗಿ ಕೆಲಸ ಮಾಡಿದ್ದ ಶ್ರೀ ತಿಪ್ಪಣ್ಣನವರನ್ನು ಹತ್ತಿರದಿಂದ

ಹಿರಿಯ ರಾಜಕಾರಣಿ, ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳು, ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕದ ಮಾಜಿ ಅಧ್ಯಕ್ಷರೂ ಆದ ಶ್ರೀ ಎನ್.ತಿಪ್ಪಣ್ಣರವರು ವಿಧಿವಶರಾದ ಸುದ್ದಿ ಕೇಳಿ ಅತೀವ ದುಃಖವಾಗಿದೆ.

ನಾಲ್ಕು ಬಾರಿ ವಿಧಾನ ಪರಿಷತ್‌ ಸದಸ್ಯರಾಗಿ, ವಿರೋಧ ಪಕ್ಷದ ಉಪನಾಯಕರಾಗಿ, ಸಭಾಪತಿಯಾಗಿ ಕೆಲಸ ಮಾಡಿದ್ದ ಶ್ರೀ ತಿಪ್ಪಣ್ಣನವರನ್ನು ಹತ್ತಿರದಿಂದ
B.S.Yediyurappa (@bsybjp) 's Twitter Profile Photo

ಹಿರಿಯ ಕಲಾವಿದೆ, ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದ ಪದ್ಮಭೂಷಣ ಬಿ.ಸರೋಜಾದೇವಿ ಅವರು ವಿಧಿವಶರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ಕನ್ನಡ, ತಮಿಳು, ತೆಲುಗು ಹಿಂದಿ ಸೇರಿದಂತೆ ಹಲವಾರು ಭಾಷೆಗಳ 200ಕ್ಕೂ ಅಧಿಕ ಚಲನಚಿತ್ರಗಳಲ್ಲಿ ಅಭಿನಯಿಸಿದ್ದ ಅವರ ನಿಧನದಿಂದ ಭಾರತೀಯ ಚಿತ್ರರಂಗ ತನ್ನ ಮಾತೃಸ್ವರೂಪಿ ಕಲಾವಿದೆಯನ್ನು

B.S.Yediyurappa (@bsybjp) 's Twitter Profile Photo

ಹೆಮ್ಮೆಯ, ಸಂಭ್ರಮದ ಕ್ಷಣ! ದಶಕಗಳ ಹೋರಾಟ, ಶರಾವತಿ ಹಿನ್ನೀರಿನ ಸಂತ್ರಸ್ತರ ಅಪೇಕ್ಷೆ ಈಡೇರಿದ ಸಾರ್ಥಕ ಸಂದರ್ಭ!! ಶರಾವತಿ ನದಿ ಹಿನ್ನೀರಿಗೆ ನಿರ್ಮಿಸಲಾಗಿರುವ ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆಯ 2.25 ಕಿ.ಮೀ ಉದ್ದದ ದೇಶದ ಎರಡನೇ ಅತಿ ದೊಡ್ಡದಾದ ಭವ್ಯ ಸಂಪರ್ಕ ಸೇತುವೆ, "ಅಂಬಾರಗೋಡ್ಲು - ಕಳಸವಳ್ಳಿ - ಸಿಗಂದೂರು ಸೇತುವೆ"ಯನ್ನು ಹೆಮ್ಮೆಯ

ಹೆಮ್ಮೆಯ, ಸಂಭ್ರಮದ ಕ್ಷಣ! ದಶಕಗಳ ಹೋರಾಟ, ಶರಾವತಿ ಹಿನ್ನೀರಿನ ಸಂತ್ರಸ್ತರ ಅಪೇಕ್ಷೆ ಈಡೇರಿದ ಸಾರ್ಥಕ ಸಂದರ್ಭ!!

ಶರಾವತಿ ನದಿ ಹಿನ್ನೀರಿಗೆ ನಿರ್ಮಿಸಲಾಗಿರುವ ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆಯ 2.25 ಕಿ.ಮೀ ಉದ್ದದ ದೇಶದ ಎರಡನೇ ಅತಿ ದೊಡ್ಡದಾದ ಭವ್ಯ ಸಂಪರ್ಕ ಸೇತುವೆ, "ಅಂಬಾರಗೋಡ್ಲು - ಕಳಸವಳ್ಳಿ - ಸಿಗಂದೂರು ಸೇತುವೆ"ಯನ್ನು ಹೆಮ್ಮೆಯ
B.S.Yediyurappa (@bsybjp) 's Twitter Profile Photo

ಕಾರ್ಕಳ ಕ್ಷೇತ್ರದ ಜನಪ್ರಿಯ ಶಾಸಕರು, ಪಕ್ಷದ ನಾಯಕರಾದ ಶ್ರೀ ವಿ.ಸುನೀಲ್ ಕುಮಾರ್ ಅವರ ತಂದೆ ಶ್ರೀ ಎಂ.ಕೆ.ವಾಸುದೇವ ಅವರು ನಿಧನರಾದ ಸುದ್ದಿ ಕೇಳಿ ಅತ್ಯಂತ ದುಃಖವಾಗಿದೆ. 'ವಾಸು ಮಾಷ್ಟ್ರು' ಎಂದೇ ಪರಿಚಿತರಾಗಿದ್ದ ಅವರು ಹಿರಿಯ ಸ್ವಯಂಸೇವಕರಾಗಿ ಹಲವಾರು ದಶಕಗಳ ಕಾಲ ಸಂಘದ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು. ಅಗಲಿದ ಹಿರಿಯರ ಆತ್ಮಕ್ಕೆ

B.S.Yediyurappa (@bsybjp) 's Twitter Profile Photo

ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಗಳಿಗೆ ಜನ್ಮದಿನದ ಭಕ್ತಿಪೂರ್ವಕ ಶುಭಾಶಯಗಳು.

ಶ್ರೀ ಆದಿಚುಂಚನಗಿರಿ ಮಠಾಧೀಶರಾದ ಪರಮಪೂಜ್ಯ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮಿಗಳಿಗೆ ಜನ್ಮದಿನದ ಭಕ್ತಿಪೂರ್ವಕ ಶುಭಾಶಯಗಳು. ಶ್ರೀಗಳ ಧಾರ್ಮಿಕ, ಆಧ್ಯಾತ್ಮಿಕ ಚಿಂತನೆಗಳು, ಸನಾತನ ಸಂಸ್ಕೃತಿಯ ರಕ್ಷಣೆ ಮತ್ತು ಶೈಕ್ಷಣಿಕ, ಆರೋಗ್ಯ ಕ್ಷೇತ್ರಗಳ ಸೇವಾಕಾರ್ಯಗಳು ಮತ್ತಷ್ಟು ಸಾರ್ಥಕವಾಗಿ ಮುಂದುವರಿಯಲಿ ಎಂದು ಪ್ರಾರ್ಥಿಸುತ್ತೇನೆ.

ಹಿರಿಯ ರಾಜಕೀಯ ಧುರೀಣರು, ಎಐಸಿಸಿ ಅಧ್ಯಕ್ಷರು, ರಾಜ್ಯಸಭೆಯ ವಿಪಕ್ಷ ನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜನ್ಮದಿನದ ಹಾರ್ದಿಕ ಶುಭಕಾಮನೆಗಳು. ದೇವರ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ. Mallikarjun Kharge

B.S.Yediyurappa (@bsybjp) 's Twitter Profile Photo

ದಾವಣಗೆರೆಯಲ್ಲಿ ನಡೆಯುತ್ತಿರುವ ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಅಪೂರ್ವ, ದಿವ್ಯಸಾನ್ನಿಧ್ಯದಲ್ಲಿ, ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದಲ್ಲಿ ಇಂದು ಪಾಲ್ಗೊಳ್ಳಲಾಯಿತು. ಸಮಾಜದ ಎಲ್ಲ ಶ್ರೀಚರಣರು, ಶ್ರೀ ಶಾಮನೂರು ಶಿವಶಂಕರಪ್ಪನವರು ಸೇರಿದಂತೆ ಎಲ್ಲ ಮುಖಂಡರು, ಗಣ್ಯರು ಈ ಬೃಹತ್ ಸಭೆಯಲ್ಲಿ ಉಪಸ್ಥಿತರಿದ್ದರು.

ಸಿದ್ದಗಂಗೆಯ ಶ್ರೀಮಠವನ್ನು ಗುರುಗಳು ಹಾಕಿಕೊಟ್ಟ ದಾರಿಯಲ್ಲಿಯೇ ಅತ್ಯುತ್ತಮವಾಗಿ ಮುನ್ನಡೆಸಿಕೊಂಡು ಹೋಗುತ್ತಿರುವ ಶ್ರೀ ಸಿದ್ದಗಂಗಾ ಮಠದ ಪೀಠಾಧಿಪತಿ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳಿಗೆ ಜನ್ಮದಿನದ ಭಕ್ತಿಪೂರ್ವಕ ಶುಭಾಶಯಗಳು. ಅವರ ಮಾರ್ಗದರ್ಶನ ಹಾಗೂ ಆಶೀರ್ವಾದ ಭಕ್ತರ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ.

A proud moment for the nation and every karyakarta of the BJP. Congratulations to PM Shri Narendra Modi Ji on completing 4,078 consecutive days in office, becoming the second longest-serving Prime Minister in India’s history. Your leadership continues to redefine governance,

A proud moment for the nation and every karyakarta of the BJP.

Congratulations to PM Shri Narendra Modi Ji on completing 4,078 consecutive days in office, becoming the second longest-serving Prime Minister in India’s history.

Your leadership continues to redefine governance,
B.S.Yediyurappa (@bsybjp) 's Twitter Profile Photo

ಹೆಮ್ಮೆಯ ನಾಯಕ ಶ್ರೀ ನರೇಂದ್ರ ಮೋದಿ ಜೀ ಈ ದೇಶ ಕಂಡ ಅತ್ಯಂತ ಶ್ರೇಷ್ಠ ಪ್ರಧಾನಮಂತ್ರಿಗಳು. ವಿಶ್ವವೇ ನಿಬ್ಬರಗಾಗುವಂತೆ ಭಾರತದ ಸಾಮರ್ಥ್ಯವನ್ನು ವಿಸ್ತರಿಸಿ, ದೇಶದ ಸಾರ್ವಭೌಮತ್ವವನ್ನು ಜಾಗತಿಕವಾಗಿ ಮುಂಚೂಣಿಗೆ ತಂದು ನಿಲ್ಲಿಸಿದ್ದು ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ರವರು. ಹಲವು ಐತಿಹಾಸಿಕ ಪ್ರಥಮಗಳಿಗೆ ಕಾರಣರಾಗಿರುವ ಅವರು ಇದೀಗ ಭಾರತದ

B.S.Yediyurappa (@bsybjp) 's Twitter Profile Photo

ಭಾರತೀಯ ಸೇನಾಪಡೆಗಳ ನಮ್ಮ ವೀರ ಯೋಧರ ಕರ್ತವ್ಯನಿಷ್ಠೆ, ಧೈರ್ಯ, ದೇಶಭಕ್ತಿ ಅದ್ವಿತೀಯ. ದೇಶ ರಕ್ಷಣೆಯ ಕಾಯಕದಲ್ಲಿ ಪ್ರಾಣತ್ಯಾಗ ಮಾಡಿರುವ ಹುತಾತ್ಮ ಯೋಧರ ಋಣ ನಮ್ಮೆಲ್ಲರ ಮೇಲಿದೆ. ನಮ್ಮ ಸೈನಿಕರು ಮತ್ತು ಅವರ ಕುಟುಂಬಗಳ ನಿಸ್ವಾರ್ಥ ಸೇವೆ, ತ್ಯಾಗಗಳಿಗೆ ಈ ಕಾರ್ಗಿಲ್ ವಿಜಯ ದಿವಸದಂದು ಗೌರವಪೂರ್ವಕ ನಮನಗಳನ್ನು ಸಲ್ಲಿಸೋಣ. #KargilVijayDivas

ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಪ್ರತಿ ತಿಂಗಳು ನಡೆಸಿಕೊಡುವ 'ಮನ್ ಕಿ ಬಾತ್' ಕಾರ್ಯಕ್ರಮವನ್ನು ಇಂದು ಬೆಂಗಳೂರಿನ ಸ್ವಗೃಹದಲ್ಲಿ ವೀಕ್ಷಿಸಲಾಯಿತು. #MannKiBaat Narendra Modi PMO India Mann Ki Baat Updates मन की बात अपडेट्स

ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಪ್ರತಿ ತಿಂಗಳು ನಡೆಸಿಕೊಡುವ 'ಮನ್ ಕಿ ಬಾತ್' ಕಾರ್ಯಕ್ರಮವನ್ನು ಇಂದು ಬೆಂಗಳೂರಿನ ಸ್ವಗೃಹದಲ್ಲಿ ವೀಕ್ಷಿಸಲಾಯಿತು. #MannKiBaat

Narendra Modi PMO India Mann Ki Baat Updates मन की बात अपडेट्स
B.S.Yediyurappa (@bsybjp) 's Twitter Profile Photo

ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಬೆಂಗಳೂರು ನಗರ ಜಿಲ್ಲಾ ಘಟಕದ ವತಿಯಿಂದ ಇಂದು ನಗರದಲ್ಲಿ ಆಯೋಜಿಸಲಾಗಿದ್ದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು, ಸಮಿತಿಯವರು ಅಭಿಮಾನಪೂರ್ವಕವಾಗಿ ನೀಡಿದ 'ಬಸವಶ್ರೀ' ಗೌರವವನ್ನು ಸ್ವೀಕರಿಸಲಾಯಿತು. ತುಮಕೂರಿನ ಸಿದ್ದಗಂಗೆಯ ಪರಮಪೂಜ್ಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ಕೆ.ವಿ.ವಿ.ಸಂಸ್ಥೆಯ

ಬೆಕ್ಕಿನಕಲ್ಮಠದ ಪೂಜ್ಯ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ಬಸವತತ್ವ ಪೀಠದ ಪೂಜ್ಯ ಶ್ರೀ ಡಾ. ಬಸವ ಮರುಳಸಿದ್ದ ಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಶಿವಮೊಗ್ಗದಲ್ಲಿ ಇಂದು ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳಲಾಯಿತು.

ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರಿಗೆ ಜನ್ಮದಿಂದ ಹಾರ್ದಿಕ ಶುಭಾಶಯಗಳು. ದೇವರ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ. Siddaramaiah CM of Karnataka