Vishweshwar Bhat(@VishweshwarBhat) 's Twitter Profileg
Vishweshwar Bhat

@VishweshwarBhat

Editor in Chief - Vishwavani Daily I Former Editor - Vijay Karnataka, Kannada Prabha & Suvarna News I Author of 88 books I Globetrotter I Thomson UK Fellow

ID:228420453

linkhttp://instagram.com/vishweshwarbhat calendar_today19-12-2010 17:29:25

35,8K Tweets

202,5K Followers

176 Following

Vishweshwar Bhat(@VishweshwarBhat) 's Twitter Profile Photo

ವಕ್ರತುಂಡೋಕ್ತಿ

ಕೆಲವರನ್ನು ಬಣ್ಣಿಸಿದರೆ ಬೇಸರಿಸಿಕೊಳ್ಳುತ್ತಾರೆ. ಕಾರಣ ತಮ್ಮ ಕುರಿತು ಇದ್ದ ಹಾಗೆ ಹೇಳುವುದನ್ನು ಇಷ್ಟಪಡುವುದಿಲ್ಲ.

account_circle
Vishweshwar Bhat(@VishweshwarBhat) 's Twitter Profile Photo

ದಾರಿದೀಪೋಕ್ತಿ 

ಬೇರೆಯವರು ನಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂದು ಅನೇಕರು ಸದಾ ಯೋಚಿಸುತ್ತಿರುತ್ತಾರೆ. ಬೇರೆಯವರು ನಮ್ಮ ಬಗ್ಗೆ ಏನೇ ಯೋಚಿಸಿದರೂ ಅದರಿಂದ ನಮಗೆ ಏನೂ ಆಗುವುದಿಲ್ಲ. ನಾವು ನಮ್ಮ ಬಗ್ಗೆ ಯೋಚಿಸಿದಾಗ ಮಾತ್ರ ಅದರಿಂದ ನಮಗೆ ಪ್ರಯೋಜನ ಆಗಬಹುದು.

account_circle
Vishweshwar Bhat(@VishweshwarBhat) 's Twitter Profile Photo

ವಕ್ರತುಂಡೋಕ್ತಿ

ಎಲ್ಲಾ ಗಂಡಸರಿಗೂ ಅವರವರ ಪತ್ನಿಯೇ ಶಕ್ತಿ. ಉಳಿದವರೇ ವೀಕ್ನೆಸ್.

account_circle
Vishweshwar Bhat(@VishweshwarBhat) 's Twitter Profile Photo

ದಾರಿದೀಪೋಕ್ತಿ

ನಿಮಗೆ ಸುಸ್ತಾದಾಗ ದಣಿವಾರಿಸಿಕೊಳ್ಳಬೇಕೇ ಹೊರತು, ಕೈಗೆತ್ತಿಕೊಂಡ ಕೆಲಸವನ್ನು ನಿಲ್ಲಿಸಬಾರದು. ಕೆಲಸ ಪೂರ್ತಿಯಾದಾಗಲೇ ದಣಿವಾರಿಸಿಕೊಳ್ಳಬೇಕು. ಈ ನಿಯಮವನ್ನು ಪಾಲಿಸಿದ್ದೇ ಆದಲ್ಲಿ, ನೀವು ಕೈಗೆತ್ತಿಕೊಂಡ ಯಾವ ಕೆಲಸವನ್ನೂ ಅರ್ಧಕ್ಕೆ ನಿಲ್ಲಿಸುವುದಿಲ್ಲ.

account_circle
Vishweshwar Bhat(@VishweshwarBhat) 's Twitter Profile Photo

ಪ್ಯಾರಾ ಸೇಲಿಂಗ್ ಮಾಡದೇ ಬಹಳ ದಿನಗಳಾಗಿದ್ದವು. ಮಾರಿಷಸ್ ನ ಕಡಲು ಮತ್ತು ತಂಪು ವಾತಾವರಣ ನೋಡಿ ಸುಮ್ಮನಿರಲು ಆಗಲಿಲ್ಲ. ಕೆಳಗಿಳಿದಾಗ ಇಷ್ಟು ಬೇಗನೆ ಮುಗಿಯಿತಲ್ಲ, ಇನ್ನೊಂದು ರೌಂಡು ಹೋಗಬೇಕಿತ್ತು ಅಂತ ಅನಿಸಿದ್ದು ಸುಳ್ಳಲ್ಲ.

ಗಾಲ್ಫ್ ಆಟದಲ್ಲಿ ಯಾವತ್ತೂ ನೀವು ಹೊಡೆಯಬಹುದಾದ ಅತ್ಯುತ್ತಮ ಶಾಟ್ ಅಂದ್ರೆ ಮುಂದಿನದು.

account_circle
Vishweshwar Bhat(@VishweshwarBhat) 's Twitter Profile Photo

ಯಾರಾದರೂ ನಿಮ್ಮ ಜತೆ, ಮೂರ್ಖತನದಿಂದ ಹೊರ ನಡೆದರೆ, ಅವರಿಗೆ ಹಾಗೆ ಹೋಗಲು ಅನುವು ಮಾಡಿಕೊಡಬೇಕು. ನಿಮ್ಮಿಂದ ಸಾಧ್ಯವಾಗದಿರುವುದನ್ನು ಅವರು ಮಾಡುತ್ತಿದ್ದರಲ್ಲ ಎಂದು ಸಂತಸಪಡಬೇಕು. ಸಾಧ್ಯವಾದಷ್ಟು ಮೂರ್ಖರಿಂದ ಅಂತರ ಕಾಪಾಡಿಕೊಳ್ಳಬೇಕು.

account_circle
Vishweshwar Bhat(@VishweshwarBhat) 's Twitter Profile Photo

ಒಂದು ತಿಂಗಳಾಗಿತ್ತು ದೇಶದೊಳಗೆ ಕಟ್ಟಿ ಹಾಕಿದವರಂತೆ ಇದ್ದೆ. ನಿನ್ನೆ ರಾತ್ರಿ ಮುಂಬೈಗೆ ಬಂದು, ಅಲ್ಲಿಂದ ಆರು ಗಂಟೆ ವಿಮಾನ ಪ್ರಯಾಣ ಮಾಡಿ, ಮಾರಿಷಸ್ ಗೆ ಬಂದೆ. ಕಣ್ಣ ಮುಂದೆ ಕಡಲು, ಅದರ ಅಂಚಲಿ ಮುಗಿಲು, ಸ್ವರ್ಗಕ್ಕೆ ಮೂರೇ ಬಾಗಿಲು!

ಎಲ್ಲರೂ ತಾವು ಸಾಕಿರುವ ನಾಯಿಯೇ ಗ್ರೇಟ್ ಎಂದು ಭಾವಿಸುತ್ತಾರೆ ಮತ್ತು ಈ ವಿಷಯದಲ್ಲಿ ಅವರೆಲ್ಲರೂ ಸರಿಯೇ ಆಗಿರುತ್ತಾರೆ.

account_circle
Vishweshwar Bhat(@VishweshwarBhat) 's Twitter Profile Photo

ದಾರಿದೀಪೋಕ್ತಿ

ಜೀವನದುದ್ದಕ್ಕೂ ಸಾಧ್ಯವಾದಷ್ಟು ಮಟ್ಟಿಗೆ ಒಳ್ಳೆಯ ವ್ಯಕ್ತಿಯಾಗಿರಲು ಪ್ರಯತ್ನಿಸಬೇಕು. ಆದರೆ ತಾನೇ ಉತ್ತಮ ವ್ಯಕ್ತಿ ಎಂದು ಸಾಬೀತುಪಡಿಸಲು ಹೋಗಿ ಸಮಯವನ್ನು ವ್ಯರ್ಥಗೊಳಿಸಬಾರದು. ಆಗ ನಿಮ್ಮ ಸುತ್ತಮುತ್ತ ಇರುವವರಲ್ಲಿ ಸಂದೇಹ ಬರುತ್ತದೆ.

account_circle